ಆತ್ಮೀಯ ಶಿಕ್ಷಕ ಬಂಧುಗಳೇ, ಕಳೆದ ಹಲವಾರು ವರ್ಷಗಳಿಂದ ಶಿಕ್ಷಕರ ಸಂಘದ ಸಹಕಾರದೊಂದಿಗೆ ಶಿಕ್ಷಕರಿಗೆ/ಶಿಕ್ಷಕಿಯರಿಗೆ ಪ್ರತ್ಯೇಕವಾಗಿ ವೇತನ ವಿವರದ ಎಸ್.ಎಂ.ಎಸ್ ಸೇವೆಯನ್ನು ಒದಗಿಸುತ್ತಾ ಬಂದಿದ್ದೇವೆ. ಆದರೆ ಈಗಿನ ಸನ್ನಿವೇಶದಲ್ಲಿ ಎಲ್ಲಾ ಶಿಕ್ಷಕರು/ಶಿಕ್ಷಕಿಯರು ಸ್ಮಾರ್ಟ್ ಫೋನ್ ಹೊಂದಿರುವುದರಿಂದ ಅವರಿಗೆ ವೇತನ ವಿವರದ ಮಾಹಿತಿಯನ್ನು ತಮ್ಮ ಮೋಬೈಲ್ ನಲ್ಲಿಯೇ ಪಡೆದುಕೊಳ್ಳುವ ಉದ್ದೇಶದಿಂದ ಈ ವೆಬ್ ಸೈಟ್ ಹಾಗೂ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಿದ್ದು ಈ ನಮ್ಮ ಕಾರ್ಯವು ತಮ್ಮ ಬೇಡಿಕೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತದೆ ಎನ್ನುವ ಆಶಾಭಾವನೆಯನ್ನು ಹೊಂದಿದ್ದೇವೆ.